ಇತಿಹಾಸ ಮತ್ತು ಪವಿತ್ರ ಪರಂಪರೆ
ಮರವೂರು ಮಹಾದೇವ ಸಿದ್ಧಿವಿನಾಯಕ ಕ್ಷೇತ್ರದ ಸ್ಥಳ ಪುರಾಣ.
ನಮೋ ವಿಶ್ವ ಸ್ವರೂಪಾಯ ನಮಸ್ತೆ ವಿಶ್ವ ಹಾರಿಣೇ | ನಮಸ್ತೆ ಸರ್ವರೂಪಾಯ ಸರ್ವಶಕ್ತಿ ನಮೋಸ್ತುತೇ || ನಮಸ್ತೆ ಭಕ್ತಿವರದ ಸರ್ವಧಾತ್ರ ನಮೋ ನಮಃ | ನಮಸ್ತೆ ನನ್ನ ಶರಣಿ ಸರ್ವ ಪ್ರಪೂರಕ ||
ಮರವೂರು ಮಹಾದೇವ ಸಿದ್ಧಿವಿನಾಯಕ ಕ್ಷೇತ್ರ ಪರಶುರಾಮ ಸೃಷ್ಟಿ :- ಅಶ್ವತ್ಥಾಮೋ ಬಲಿರ್ವ್ಯಾಸಃ ಹನುಮಾಂಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ ಪರಶುರಾಮನು ಶಿವ ತಪೋಬಲದಿಂದ ಕದರಿ ಕ್ಷೇತ್ರದ ರಸಕೂಪದಲ್ಲಿ ಮಹಾದೇವ ಮಂಜುನಾಥನನ್ನು ಬಾಲಕಿಯ ಶೇಖರನಾಗಿ ಕಂಡು ತನ್ನ ಕೊಡೆಯನ್ನು ಬಸಾಡಿ ಕನ್ಯಾಕುಮಾರಿಯಿಂದ ಗೋಕರ್ಣದ ವರೆಗಿನ ಈ ಭೂಮಿಯನ್ನು ಸಮುದ್ರ ರಾಜನಿಂದ ಪಡೆದ ಈ ದೇಶವು ಪರಶುರಾಮ ಸೃಷ್ಟಿಯಾಯಿತು. ಸೂರ್ಯವಂಶದ ಪರಶುರಾಮನು ಚಿರಂಜೀವಿಯಾಗಿ ಈಗಲೂ ಹಿಮಾಲಯದಲ್ಲಿರುವ ಎಂದು ಪ್ರತೀತಿ. ಕದ್ರಿ ಜೋಗಿ ಮಠದಲ್ಲಿರುವ ಪರಶುರಾಮ ಕುಂದವೇ ಅದು ಎಂದು ಅವರು ಶಿವ ತಪಸ್ಸನ್ನಾಚರಿಸಿದ ಸ್ಥಳವಾಗಿದೆ. ಪರಶುರಾಮನು ಅಂದು ಉರಿಸಿದ ನಂದಾದೀಪ್ ಇಂದು ಕೂಡ ಅಲ್ಲಿ ಉರಿಯುತ್ತಿರುವುದು. ಈ ಪರಶುರಾಮ ಕುಂದದ ಭಸ್ಮ ಭಕ್ತರಿಗೆ ಬಂಗಾರವಾಗುವುದು. ಬುದ್ಧಿ ಹೀನರಿಗೆ ಬೂದಿಯಾಗುವುದು. ಭೀಷ್ಮಾಚಾರ್ಯರ ಮತ್ತು ಸುತಪುತ್ರ ಕರ್ಣನ ಗುರುವಾದ ಪರಶುರಾಮನಿಗೊಲಿದ ಮಂಜುನಾಥನನ್ನು ಕದ್ರಿ ಜೋಗಿ ಮಠದ ಹತ್ತಿರ ಗುಹೆಗಳನ್ನು ರಚಿಸಿ ಪಾಂಡವರೂ ಕೆಲಕಾಲವಿದ್ದು ಭಜಿಸಿ ಪೂಜಿಸಿದ್ದರು.
ಕೃತೇ ರೇಣುಕಾ ಮೈಮ್ಯ – ತ್ರೇ ತೇ ಸೀತಾ ಮೈಮ್ಯಃ ದ್ವಾಪರೇ ದ್ರೌಪದಿ ಮೈಮ್ಯ ಕಲಿಯುಗೆ ಗೃಹೇ ಗೃಹೇ ಮೈಮ್ಯ. ಪರಶುರಾಮನು ವರುಣನಿಂದ ಪಡೆದ ವೈಷ್ಣವ ಧನಸ್ಸಿನಿಂದ ದುಷ್ಟನಾದ ಕಾರ್ತವೀರ್ಯ ಕ್ಷತ್ರಿಯನನ್ನು ಕೊಂದು, ಮುಂದಕ್ಕೆ ಧರ್ಮ ರಕ್ಷಣೆ ಮಾಡು ಎಂದು ಶ್ರೀರಾಮನಿಗೆ ವೈಷ್ಣವ ಧನುಃ ಸ್ವಪ್ನ ದಾನ ಮಾಡಿದ್ದನು. ರಕ್ಷಣೆಯಿಲ್ಲದ ಅಬಲೆ ಸೀತೆಯನ್ನು ಕಾಡಿನಿಂದ ಕಪಟ ಸನ್ಯಾಸಿಯಾಗಿ ರಾವಣನು ಕದ್ದುಕೊಂಡು ಪುಷ್ಪಕ ವಿಮಾನದಲ್ಲಿ ಲಂಕೆಗೆಕೊಂಡು ಹೋಗುವಾಗ ಸೀತೆಯು, ಪರಶುರಾಮನು ಶ್ರೀ ರಾಮನಿಗೆ ಧರ್ಮ ರಕ್ಷಣೆ ಮಾಡೆಂದು ಕೊಟ್ಟಿರುವ ವೈಷ್ಣವ ಧನುಸ್ಸನ್ನು ನೆನೆಸಿದಾಗ ಪುಷ್ಪಕ ವಿಮಾನ-ಸೀತೆಯ ಪತಿವ್ರತಾ ಶಕ್ತಿಯಿಂದ ಪರಶುರಾಮ ಕುಂದದ ಮೇಲಿಂದ ಹಾರುವಂತಾಗಿ ಅಲ್ಲಿ ಸೀತೆಯು ರಾವಣನ ಮುಖದ ಮೇಲೆ ಉಗುಳಿದ ಜೊಲ್ಲು ಜ್ವಾಲಾಮುಖಿಯಾಗಿ ಕೆಳಗೆ ಬಿದ್ದು ಅಲ್ಲಿ “ಸೀತಾಕುಂಡ” ಸೀತಾ ಬಾವಿಯಾಯಿತು. ಪರಶುರಾಮನ ಅಪೇಕ್ಷೆಯ ಮೇರೆಗೆ ಜೋಗಿನಾಥ ಸಿದ್ಧ ಪಂಥದ್ದಾರೇಣ ಈಶ್ವರನು – ಮಂಜುನಾಥನಾಗಿ ಕದ್ರಿಯಲ್ಲಿಯೂ, ಪಾರ್ವತಿಯ ಅಂಶ ಮಂಗಳಾಯಾಗಿ ಮಂಗಳಾದೇವಿಯಲ್ಲಿಯೂ ನೆಲೆಸುವಂತಾಯಿತು.
ಸಾಕ್ಷಾತ್ ಶಿವಯೋಗೀಶ್ವರನೇ ಶಿವಗೋರಕ್ಷನಾಥರಾಗಿಯೂ ಅವರ ಗುರು ಮತ್ಸ್ಯೇಂದ್ರನಾಥರಾಗಿಯೂ, ವಿಕ್ರಮಾದಿತ್ಯ ಶಕ 57ರಲ್ಲಿ ಉಜ್ಜಯಿನಿಯ ರಾಮ ಮನೆತನದ- ರಾಜಭರ್ತೃ ಹರಿ ಮತ್ತು ಗೋಪಿಚಂದ ಅರಸನ ಕಾಲದಲ್ಲಿ ಕಾಂಚಿ ಕೊಂಡದಿಂದ ದೇಶಪರ್ಯಟನೆ ಮಾಡಿಕೊಂಡು ದಕ್ಷಿಣಕ್ಕೆ ಬಂದು ಮಂಗಳೂರಿನಲ್ಲಿ ಮಂಗಳಾದೇವಿಯನ್ನೂ ಕದ್ರಿಯಲ್ಲಿ ಮಂಜುನಾಥನನ್ನೂ ಪ್ರತಿಷ್ಠಿಸಿದರು. ಹನ್ನೆರಡನೇ ಶತಮಾನದಲ್ಲಿ ಹೊಯ್ಸಳರಿಂದ ಬಂಗಾರಿಗೆ ರಾಜ್ಯವು ದೊರೆತಂದಿನಿಂದ, ವಿಜಯ ನಗರದ ಅರಸರು – ಇಕ್ಕೇರಿ ಅರಸರ ಕಡೆಗೆಕೂಡಲಮಾಣಸ ಕಾಲದಲ್ಲಿ ಈ ಮಂಗಳಾದೇವಿ ಮತ್ತು ಕದ್ರಿ ಮಂಜುನಾಥ ದೇವಾಲಯಗಳ ಜೀರ್ಣೋದ್ಧಾರವಾಯಿತು. ಕೂಡಲಮಾಣಸ ಕಾಲದಲ್ಲಿ ಈ ಊರು ಕೂಡಲವಾಯಿತು. ವಿದ್ಯಾ ಮಂಗಳದಿಂದ ಈ ಊರು ಮಂಗಳೂರು ಆಯಿತು, ಶಿವ ಮಹಾಪುರಾಣದಲ್ಲಿ ಬ್ರಹ್ಮನು ಶಿವಾಅವತಾರಗಳನ್ನು ವರ್ಣಿಸುವ ಪ್ರಕರಣದಲ್ಲಿ- ಶಿವನೇ ಗೋರಕ್ಷ ರೂಪೇಣ ಯೋಗಿಕಾಸ್ತಮ ಜಿಂಗೋಹಮ ಯಿಮಾಧ್ಯಂ ಗೃಹೀತ್ವಾಸ್ಥಾಪನೆ ಸ್ಥಾಪಿಕಾ ಯೋಗಿನೋ ಪ ಜ ಃ ಎಂದು ವಿವರಿಸಿರುವುದು.
ಐತಿಹಾಸಿಕ ವಿಚಾರವಾಗಿ - ಕ್ರಿ. ಪೂ. 493ರಲ್ಲಿ ಅದ್ವೈತವಂತ ಪ್ರತಿಷ್ಠಾಪಕರಾದ ಶಂಕರಾಚಾರ್ಯರು ಬೌದ್ಧಮತ ಪ್ರಚಾರವನ್ನು ವಿರೋಧಿಸುತ್ತಿದ್ದರು. ಶಂಕರಾಚಾರ್ಯರ ಗುರುಗಳು ಕುಮಾರಿಲ ಭಟ್ಟರು ಉಜ್ಜಯಿನಿಯ ರಾಜ ಸಂಘತ್ಯ ಬೌದ್ಧಧರ್ಮವನ್ನು ಅವಲಂಬಿಸಿದ್ದನು. ಅದರೆ ಅವನ ಪಟ್ಟದರಾಣಿ ವೇದಗಳ ಎದುರಿಯಾಗಿದ್ದಳು. ಅವಳು ಕುಮಾರಿಲ ಭಟ್ಟರನ್ನು ಕನ್ನಲ್ಲಿಗೆ ಬರಮಾಡಿಸಿ ತನ್ನ ಪತಿ ಸುಧನ್ವನು ವೈದಿಕ ಧರ್ಮಾಚಾರದವನನ್ನಾಗಿ ಮಾಡಿದಳು. ಆ ಕಾಲದಲ್ಲಿ ಬೌದ್ಧಮಹಾವಲಂಬಿಗಳಿಗೂ, ವೈದಿಕ ಮತದವರಿಗೂ ಆಗಾಗ ಬಲು ದೊಡ್ಡ ಸಂವಾದಗಳು ನಡೆಯುತ್ತಿದ್ದು ಕೂಡಲವಲನ್ನು ಜೈನವಂತಾವಲಂಬಿ ಕುಟುಂಬದ ಕೂಡಲವಣಸೇಂಬ ರಾಜನು ಆಳುತ್ತಿದ್ದನು. ಆತನು ನಾಥ ಸಿದ್ಧ ಪಂಥವನ್ನು ಅನುಸರಿಸಿ, ಕದ್ರಿಯಲ್ಲಿ ಮಂಜುನಾಥ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದನೆಂದು ತಿಳಿದು ಬರುತ್ತದೆ.
ಇಂದಿಗೆ ಸರ್ವಸಾಧಾರಣ 2028 ವರ್ಷಗಳ ಹಿಂದೆ ಗೋರಕ್ಷನಾಥರೂ ಅವರ ಗುರು ಮತ್ಸ್ಯೇಂದ್ರನಾಥರೂ ಕದ್ರಿ ಜೋಗಿ ಮಠದಲ್ಲಿ ಕೆಲಿ ಕಾಲವಿದ್ದು ನಂತರ ಗೋರಕ್ಷನಾಡತಕ್ಕಡೆ ಉತ್ತರಾಭಿಮುಖವಾಗಿ ಹೊರಟಾಗ ಮರವೂರಿನಲ್ಲಿ ಫಲ್ಗುಣಿ ನದಿ ದಾಟುವಷ್ಟರಲ್ಲಿ ಅರುಣೋದಯವಾಗಲು – ಈ ಮರವೂರು ಮಹಾದೇವ ಸಿದ್ಧಿ ವಿನಾಯಕ ಕ್ಷೇತ್ರದಲ್ಲಿ – ನೆಲ್ಲಿ, ಬಿಲ್ವ, ವಟವೃಕ್ಷ, ಅಶ್ವತ್ಥಮರಗಳ ಗುಂಪಿನಲ್ಲಿ ಮಹಾದೇವ ಲಿಂಗವನ್ನು ಪ್ರತಿಷ್ಠಿಸಿದಾಗ ಫಲ್ಗುಣಿನದಿಯು ಕವಲೊಡೆದು ಒಲತಂದು, ಕೆರೆಯಂತಾಗಿ ಗಂಗೋದಕವು ಸೂರ್ಯೋದಯದ ಸಮಯದಲ್ಲಿ ಮಹಾದೇವನನ್ನು ಪೂಜಿಸಲು ಅನುಕೂಲಿಸು ಈ ವಿಚಾರವನ್ನು ಕೆಲಿ ಕಾಲದ ನಂತರ ತಿಳಿದುಕೊಂಡ ಕೂಡಲಮಾಣಸಂ ಅಲ್ಲಿಗೆ ಭೇಟಿಕೊಟ್ಟು, ಈ ಸ್ಥಳ ಮಾಹಾತ್ಮ್ಯ ಕಟಾಕ್ಷದಿಂದ ತೃಪ್ತಿ ಪಟ್ಟು - ಮರವೂರಿನ ಜೈನ ಮನೆತನದವರಿಗೆ ಸಹಕಾರಕೊಟ್ಟು ಅಲ್ಲಿ ಮಹಾದೇವಲಿಂಗವನ್ನು ಪ್ರತಿಷ್ಠಿಸಲ್ಪಡುವಂತಾಯಿತು. ನಂತರ ಕುಲ ಕ್ರಮೇಣ ಗಣಪತಿಯನ್ನೂ ನಂದಿಯನ್ನೂ ಶಿಲೆಗಳಿಂದ ತಯಾರಿಸಿ ಪ್ರತಿಷ್ಠಿಸಲ್ಪಟ್ಟಿತು.
ಅನೇಕ ವರ್ಷಗಳ ನಂತರ ಕ್ಷತ್ರಿಮಗಳಿಗೆ ಒಳಪಟ್ಟು ಜೈನ ಮನೆತನವೂ ಈ ಕ್ಷೇತ್ರವೂ ಬೇರೆ ಬೇರೆ ಜನರ ಆಡಳಿತದಿಂದಾಗಿ ಕ್ಷೀಣಿಸಿತು. ಅನೇಕ ಕಾಲಗಳ ನಂತರ ಬಂಟರ ಸಮಾಜದವರ ವಶಕ್ಕೆ ಈ ಕ್ಷೇತ್ರವು ಬಂದಾಗ ಮಹಾದೇವ ಸಿದ್ಧಿ ವಿನಾಯಕ ಕ್ಷೇತ್ರದ ಜೀರ್ಣೋದ್ಧಾರವಾಯಿತು. ಕಟ್ಟಿ ಕಡೆಗೆ ಟಿಪ್ಪು ಸುಲ್ತಾನನ ಕಾಲದಲ್ಲಿ ದುಷ್ಟರು ದೇವಾಲಯದ ಭಂಡಾರವನ್ನು ದೋಚಿ, ಕಟ್ಟಡಗಳನ್ನು ಕೆಡವಿದರೆಂದು ತಿಳಿದುಬರುತ್ತದೆ. ಅಂದಿನಿಂದ ಈವರೆಗೆ ಧೂಪ ಕೃತಿ ಮಾಡುವುದರಿಂದಾಗಿ ಜೀರ್ಣೋದ್ಧಾರವಾಗಿದ್ದ ಈ ಮಹಾದೇವ ಸಿದ್ಧಿ ವಿನಾಯಕ ಕ್ಷೇತ್ರವನ್ನು ಪುನರ್ನಿರ್ಮಿಸಿ ತಾ. 30-4-71ನೇ ಇಸವಿಯಲ್ಲಿ ಬ್ರಹ್ಮಕಳಶ ನಡೆಯುವುದಕ್ಕೆ ಕಾರಣರಾದ ಮರವೂರು ಕುಟುಂಬಸ್ಥರು, ಅವರ ನೆಂಟರಿಷ್ಟರೂ ಮತ್ತು ಊರ ಪರವೂರ ಸದ್ಭಕ್ತರು ಮರವೂರು ಮಹಾದೇವ ಸಿದ್ಧಿ ವಿನಾಯಕ ಕೃಪೆಗೆ ಪಾತ್ರರಾಗಿರುವರು. ನಮಃ ಮಹಾದೇವಾಯ ನಮಃ ನಮಃ ಸಿದ್ಧಿ ವಿನಾಯಕಾಯ ನಮಃ.
ಮರವೂರು ಮಹಾದೇವ ಸಿದ್ಧಿವಿನಾಯಕ ಜೀರ್ಣೋದ್ಧಾರ ಜೀರ್ಣೋದ್ಧಾರದಿಂದ ಆಶೀರ್ವಾದ ಕ್ಷೇತ್ರದ ಮಹಾಜಪತಿಯು ಸಿದ್ಧಿ ವಿನಾಯಕನಾಗಿರುವುದರಿಂದ ಆಶೀರ್ವಾದ ಪಡೆದಂತಾಗುತ್ತದೆ. ಸಿದ್ಧಿಯಂಬುದಾಗಿದೆಯೆಂದು. ಈ ಕ್ಷೇತ್ರದ ಮತ್ತು ಮರವೂರು ಪ್ರದೇಶದ ರಕ್ಷಣೆಗಾಗಿ ರಕ್ಷಿ ಪುಷ್ಪ ಸಕಲ ನಂದಿ ಶಿವಮಾರ್ಗವಾಗಿರುವುದು, ಮರವೃಕ್ಷವೇ ಸೀತೆ ಕೊಟ್ಟು ಈ ಪೂಜಾರ ಕಲ್ಪಿಸಿದ ಸತ್ಯ ತೋರಿಬರುವುದು. ವಿದ್ಯಾರ್ಥಿಗಳಿಗೆ ಮರವೂರು ಸಿದ್ಧಿ ವಿನಾಯಕ ವಿದ್ಯಾಧಿಪತಿಯಾಗಿರುವುದರಿಂದ ಅನೇಕ ವಿದ್ಯಾರ್ಥಿಗಳು ಅಲ್ಲಿ ಬಂದು ಗುಣಪಾಠವನ್ನು ವಿಜ್ಞಾಪನೆಪತ್ರವನ್ನು ಪೂಜಿಸುವರು, ಇಲ್ಲಿಯ ವಿದ್ಯಾರ್ಥಿಗಳು ಬಹು ಬಂದು ಬಂದೊಂದಿಗೆ ಮಕ್ಕಳನ್ನನುಗ್ರಹಿಸಿ ಪ್ರೀತಿಸಿ. ಸಾವಿರಾರು ಜನರು, ತಂದೆ, ತಾಯಿ ಒಪ್ಪಿಸಿದ ಸರ್ವ ಸಂಕಟದೇಶ ಪರಿಹಾರವೆಂದು ಆನಂದದಿಂದ ಬಾಳುತ್ತಾ ತಿಳಿದುಕೊಂಡಿರುವರು. ಈ ಮರವೂರು ಪ್ರದೇಶದ ಜನರು ಯಾರೇ ಆಗಲಿ ಶುಭ ಕೆಲಸಕ್ಕೆ ಹೋಗುವ ಮುಂಚಿತವಾಗಿ ಮರವೂರು ಸಿದ್ಧಿ ವಿನಾಯಕನನ್ನು ಪ್ರಾರ್ಥಿಸಿ ಕಾರ್ಯ ಮುಂದುವರಿಸುವರು.
ಈ ಸ್ಥಳ ಪುರಾಣವನ್ನು ಸಮಿತಿ ನೀಡಿದ ಕನ್ನಡ ಮೂಲ ಪಠ್ಯದಿಂದ ಪ್ರಕಟಿಸಲಾಗಿದೆ. ಇಂಗ್ಲಿಷ್ ಅನುವಾದವು ಭಕ್ತರ ಸೌಲಭ್ಯಕ್ಕಾಗಿ.